Wednesday, 29 July 2015

ಮಾತ್ರ ಗಣ:

ಮಾತ್ರ ಗಣ:
ಮಾತ್ರೆಗಳಿಂದ ಕೂಡ್ದ ಗಣಗಳು ಮತ್ತು ನಿಯಮಕ್ಕೊಳಪಟ್ಟ ಗಣಗಳನ್ನು ಮಾತ್ರೆ ಗಣಗಳೆನ್ನುತ್ತೇವೆ.
ಇಲ್ಲಿ ಗಣವನ್ನು ಅಳೆಯುವ ಮಾನ ದಂಡ ಮಾತ್ರೆಗಳು
ಉದಾ:
U U U - U
ಬ ಸ ವ ರಾ ಜ
ಒಂದು ಹ್ರಸ್ವಸ್ವರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಕಾಲವನ್ನು ಮಾತ್ರೆ ಎನ್ನುತ್ತೇವೆ,
ಈ ಮಾತ್ರ ಮೌಲ್ಯವನ್ನು ಲಘು (U) ಮತ್ತು ಗುರು (-) ಚಿಹ್ನೆಯಿಂದ ಗುರುತಿಸುತ್ತೇವೆ
ಮಾತ್ರಗಣಗಳಲ್ಲಿ 3 ಪ್ರಕಾರಗಳು
1. ಮೂರು ಮಾತ್ರೆ ಗಣ 2. ನಾಲ್ಕು ಮಾತ್ರೆ ಗಣ 3. ಐದು ಮಾತ್ರೆ ಗಣ
1. ಮೂರು ಮಾತ್ರೆ ಗಣ: ಪ್ರತಿ ಮಾತ್ರಗಣದ ಮದ್ಯೆ ಪ್ರತ್ಯೇಕತೆ ಇರಬೇಕು ಅಂದರೆ ಒಂದು
ಗುರುವಿನ ಎರಡು ಮಾತ್ರೆಗಳು ಹಾಚೆ ಈಚೆ ಗಣಕ್ಕೆ ಹಂಚುವಂತಿಲ್ಲ
ಮಾತ್ರ ವೃತ್ತಗಳು : ಇದು ಪ್ರಾಕೃತದಿಂದ ಕನ್ನಡಕ್ಕೆ ಬಂದಿವೆ ಮಾತ್ರ ಗಣಗಳಿಂದ ಕೂಡಿದ ಪದ್ಯ ಜಾತಿಗಳಿಗೆ ಮಾತ್ರೆ ವೃತ್ತಗಳೆನ್ನುತ್ತಾರೆ
ಮಾತ್ರೆ ವೃತ್ತಗಳಲ್ಲಿ ಪ್ರಧಾನವಾದುವೆಂದರೆ ಕಂದಪದ್ಯ, ಷಟ್ಪದಿ ಮತ್ತು ರಗಳೆ

ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು

  ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...