ವಚನಗಳು
ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ..
ವಚನಗಳ ವಿಧಗಳು
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :
ಏಕವಚನ.
ಬಹುವಚನ
ಏಕವಚನ
ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ. ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು….. ಇತ್ಯಾದಿ
ಬಹುವಚನ
ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು.. ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ
ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು
(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ. ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ
(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ
ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು
ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...
-
ವಿಭಕ್ತಿ ಪ್ರತ್ಯಯಗಳು ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ...
-
ಕನ್ನಡ ವ್ಯಾಕರಣ : ಸಂಗ್ರಹ ಕನ್ನಡ ವರ್ಣಮಾಲೆಯ ಸಂಗ್ರಹ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ...
-
ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು ತಿಳಿಸುವುದೇ ನಾಮ ಪದ(ಪ್ರಕೃತಿ) ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ ಇದರಲ್ಲಿ 2 ವಿಧ ಸಹಜ ನಾಮಪದ: ...